ನಮ್ಮ ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘವು 1977 ರಲ್ಲಿ ಸ್ಥಾಪನೆಯಾಗಿದ್ದು ಅದರದಡಿಯಲ್ಲಿ ಮಂಗಳೂರು ವಿಭಾಗ ಸಂಘವು 2002 ರಲ್ಲಿ ರಚಣೆಯಾಗಿರುತ್ತದೆ.
ನಮ್ಮ ಸಂಘವು ಸಂಘದ ಸದಸ್ಯರ ನಾಗರೀಕ ಆರ್ಥಿಕ ಹಾಗೂ ಸೇವಾ ಸಮಸ್ಯೆಗಳನ್ನು ಬಗೆ ಹರಿಸುವ, ಅವರ ಹಕ್ಕು ಬಾಧ್ಯತೆಗಳನ್ನು ಸಂರಕ್ಷಣೆ ಮಾಡುವ ಸರಕಾರದಿಂದ ದೊರೆಯುವ ಸವಲಭ್ಯತೆಗಳನ್ನು ದೊರಕಿಸುವ ಹಾಗೂ ಸದಸ್ಯರುಗಳ ಸಮಸ್ಯೆಗಳನ್ನು ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತಲುಪಿಸಿ ಬಗೆಹರಿಸುವ ಕೆಲಸವನ್ನು ಕಳೆದ ಹಲವಾರು ವರ್ಷಗಳಿಂದ ಮಾಡಿಕೊಂಡು ಬಂದಿದೆ. ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಹಾಗೂ ಕ್ರೀಡೆ , ಇನ್ನಿತರ ಕೆಲಸಗಳಿಂದ ಇಲಾಖೆಗೆ ಗೌರವ ತಂದವರನ್ನು ಸನ್ಮಾನಿಸುತ್ತಾ, ರಕ್ತದಾನ ಶಿಬಿರ ಮುಂತಾದ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು ಮುಂದೆಯೂ ಸದರಿ ಕಾರ್ಯಗಳನ್ನು ಮುಂದುವರೆಸುತ್ತೇವೆ.
ನಮ್ಮ ಸಂಘದ ಸರ್ವ ಸದಸ್ಯರ ಹಿತದೃಷ್ಟಿಯಿಂದ ಪ್ರತಿ ವರ್ಷ ಬೇರೆ ಸಂಘಗಳಿಗೆ ಮಾದರಿಯಾಗಿ ಸಂಘದ ಸರ್ವ ಸದಸ್ಯರಿಗೆ ಹೆಲ್ಮೆಟ್, ಶೂ, ಜಾಕೆಟ್ ವಿತರಣೆ ಮಾಡಲಾಗಿದೆ ಹಾಗೂ ಕರ್ತವ್ಯ ನಿರ್ವಹಿಸುವಾಗ ಅಪಘಾತದಲ್ಲಿ ಗಾಯಗೊಂಡವರಿಗೆ ಹಣಕಾಸಿನ ನೆರವು ನೀಡುತ್ತ ಬಂದಿದೆ.